Advertisements
What's New?

ನನ್ನ ಮೊದಲನೇ ಬರಹ

Archives


|| ಓಂ ಗಂ ಗಣಪತಯೇ ನಮಃ ||

ವಕ್ರ ತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ |

ನಿರ್ವಿಘ್ನಮ್ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದ ||

ಶ್ರೀ ಗುರುಭ್ಯೋ ನಮಃ

ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳನ್ನು ಕೋರುತ್ತಾ ನನ್ನ ಈ ಬರವಣಿಗೆಯನ್ನ ಕಾರ್ಯರೂಪುಗೊಳಿಸುತ್ತಿದ್ದೇನೆ.ಇಂದು ದಿನಾಂಕ 5ನೇ ಸೆಪ್ಟೆಂಬರ್ 2016, ಭಾದ್ರಪದ ಮಾಸ, ಶುಕ್ಲ ಪಕ್ಷ, ಚತುರ್ಥಿ ದಿವಸ. ಅಂದರೆ ಗಣೇಶನ ಹಬ್ಬ. ಇಡೀ ಭಾರತ ದೇಶವೇ ಗಣೇಶನ ಹಬ್ಬದ ಸಡಗರದಲ್ಲಿ ಮುಳುಗಿ ಹೋಗಿದೆ. ನಾನು ಬೆಂಗಳೂರಿನಲ್ಲೇ ಇದ್ದಿದ್ದರೆ ಚೆನ್ನಾಗಿ ಆಚರಿಸಬಹುದಿತ್ತು. ಎಲ್ಲೋ ದೂರದ ದೇಶದಲ್ಲಿ ಕುಳಿತು ಆ ಗಣೇಶನನ್ನು ಆರಾಧಿಸಿ ಪೂಜಿಸುವ ಭಾಗ್ಯ ನನಗೊಲಿದು ಬಂದಿದೆ, ಆದರೂ ನಮ್ಮ ಮಣ್ಣಿನ ಸೊಗಡಾಗಲಿ, ಸಂಸ್ಕೃತಿಯಾಗಲಿ  ಇಲ್ಲಿಲ್ಲ.

ತಕ್ಕಮಟ್ಟಿಗೆ ನನಗೆ ತಿಳಿದ ಜ್ಞಾನದಲ್ಲಿ ಆ ಗಣೇಶನ ಪೂಜೆಯನ್ನು ನೆರವೇರಿಸಿ ಮನಸ್ಸು ತೃಪ್ತಗೊಂಡಿದೆ. ನನಗೆ ಮದುವೆಯಾದ ಮೇಲೆ ಇದು ಮೊದಲನೇ ಹಬ್ಬ, ಆದರೆ ಹೆಂಡತಿ ಜೊತೆಯಲ್ಲಿದ್ದುಕೊಂಡು ಹಬ್ಬವನ್ನು ಆಚರಿಸಲಿಕ್ಕಾಗಲಿಲ್ಲ ಎನ್ನುವ ಬೇಸರ ಇದ್ದೆ ಇದೆ. ಆದರೂ ಎಲ್ಲ ದೈವನಿಮಿತ್ತಂ ಅಂದುಕೊಂಡು, ಕಾರ್ಯ ನಿಮಿತ್ತಂ ಬಹುದೂರ ಪ್ರಯಾಣಮ್! ಎಂದುಕೊಂಡು ಜೀವನ ಸಾಗಿಸುತ್ತ, ಈ ಗಣೇಶನ ಹಬ್ಬವನ್ನು ಇಂದು ಇಲ್ಲಿ ಆಚರಿಸಿದ್ದಕ್ಕೆ ಮನಃ ಸಂತೋಷವಾಗಿದೆ.

dancing-ganesha-AT14_l

ನನ್ನ ಎಷ್ಟೋ ದಿವಸಗಳ ಬರವಣಿಗೆಯ ಕಲ್ಪನೆಗೆ ಇಂದು ಅಧಿಕೃತ ಮುದ್ರೆಯನ್ನು ಒತ್ತುತ್ತಿದ್ದೇನೆ. ಇದಕ್ಕೆ ಸ್ಪೂರ್ತಿ ನನ್ನ ಹೆಣ್ಣುಕೊಟ್ಟ ಮಾವ ಚಿಂತಾಮಣಿ ಕೊಡ್ಲೆಕೆರೆ ಹಾಗೂ ನನ್ನ ಧರ್ಮಪತ್ನಿ ಕುಂಕುಮ. ನನ್ನ ಮಾವ ಸಾಹಿತ್ಯ ಕ್ಷೇತ್ರದಲ್ಲಿ ಒಳ್ಳೆಯ ಹೆಸರುಗಳಿಸಿದವರು. ಅವರಿಂದ ನಾನು ಬಹಳಷ್ಟು ಕಲಿತಿದ್ದೇನೆ. ಅವರೇ ನನ್ನ ಮಾರ್ಗದರ್ಶಕರು ಹಾಗೂ ಗುರುಗಳು. ಮೊದಲನೆಯದಾಗಿ, ಅವರಿಗೆ ಶಿಕ್ಷಕರ (ಗುರುಗಳ) ದಿನಾಚರಣೆಯ ಶುಭಾಶಯಗಳನ್ನು ಕೋರುತ್ತಾ  ನನ್ನ ಈ ಬರವಣಿಗೆಯನ್ನು ಅರ್ಪಿಸುತ್ತಿದ್ದೇನೆ.

ನನ್ನ ಮನಸ್ಸಿನ ಕಲ್ಪನೆಗಳು ಹಾಗೂ ಅಭಿರುಚಿಗಳನ್ನು, ಒಳ್ಳೆಯ ಬರವಣಿಗೆಯ ಮೂಲಕ ಸಮಾಜಕ್ಕೆ ತಲುಪಿಸಬೇಕು ಎನ್ನುವುದು ಕನಸಾಗಿತ್ತು. ಆದರೆ ಇಷ್ಟು ವರ್ಷ ನಾನು ಸುಮ್ಮನೆ ಕುಳಿತಿದ್ದೆ. ಕಾರಣ ನನ್ನ ಬದ್ಧ ವೈರಿ ಆಲಸ್ಯ, ಅದು ಅಂಟಿಕೊಂಡೇ ಬಂದಿತ್ತು. ಈಗ ಅದನ್ನೆಲ್ಲ ದೂರಕ್ಕಿಟ್ಟು, ನನ್ನ ಕನಸಿನ ಕೂಸಾದ, ಬರವಣಿಗೆಗೆ ಒತ್ತು ಕೊಟ್ಟು ಸಮಯ ಮೀಸಲಿಡಲು ಪಣತೊಟ್ಟಿದ್ದೇನೆ. ಯಾವುದೇ ವ್ಯಕ್ತಿಗಾಗಲಿ, ಅವನು ಮಾಡುವ ಕೆಲಸಕ್ಕೆ ಅಥವಾ ಕಾರ್ಯಕ್ಕೆ ಒಂದು ಬಾಹ್ಯ ಒತ್ತು ಸಿಕ್ಕರೆ ಅವನು ಅರ್ಧ ಗೆದ್ದಂತೆ.

ಈಗಿನ ಸಮಾಜದಲ್ಲಿ ಬಹುಸಂಖ್ಯಾತರು (ನನ್ನನ್ನೂ ಸೇರಿಸಿ), ಫೇಸ್ಬುಕ್,ವಾಟ್ಸ್ ಆಪ್, ಟ್ವಿಟ್ಟರ್ ಗಳಂಥ ಸೋಶಿಯಲ್ ಮೀಡಿಯಾಗಳಲ್ಲಿ ಮುಳುಗಿ ಹೋಗಿ ತಮ್ಮ ಕ್ರಿಯಾಶೀಲತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಸಮಯ ಸುಮ್ಮನೆ ಪೋಲಾಗುತ್ತಿದೆ. ಇದೊಂದು ದುರಂತವೇ ಸರಿ. ಈಗಲಾದರೂ ನನ್ನನಂಥವರು ಎಚ್ಛೆತ್ತುಕೊಳ್ಳದಿದ್ದರೆ, ಸಮಾಜಕ್ಕೆ ನೀಡಬಹುದಾದ ಕೊಡುಗೆಯನ್ನ ತಪ್ಪಸಿಕೊಳ್ಳಬೇಕಾದೀತು. ಈಗಲಂತೂ ನನಗೆ ಒತ್ತು ಕೊಟ್ಟು ತಿದ್ದಿ ತೀಡಲು ಒಂದು ಶಕ್ತಿ ಸಿಕ್ಕಂತಾಗಿದೆ.ಅದಕ್ಕೆ ನಾನು ಚಿರಋಣಿ.

Advertisements
About Manjunath Hiregange (5 Articles)
Creative Being, Generalist, Very Cool, Positive Mind

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: