Advertisements
What's New?

ಕರ್ನಾಟಕದಲ್ಲಿ ಶಿಕ್ಷಣ

Archives


ಪ್ರಾಥಮಿಕ ಶಿಕ್ಷಣ

ಪ್ರಾಚೀನ ಭಾರತದ ಶಿಕ್ಷಣಕ್ಕೆ ಸಂಬಂಧಿಸಿದಂತೆ ದೊರೆತಿರುವ ಸಾಕ್ಷ್ಯಾಧಾರಗಳೆಲ್ಲ ಬಹುಮಟ್ಟಿಗೆ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದವು. ಪ್ರಾಥಮಿಕ ಶಿಕ್ಷಣಕ್ಕಿದ್ದ ಸೌಲಭ್ಯಗಳನ್ನು ಈಚೆಗೆ ಇಲ್ಲಿಯ ದೇಶೀಯ ಶಿಕ್ಷಣಪದ್ಧತಿಯಲ್ಲಿದ್ದ ವ್ಯವಸ್ಥೆಯ ಆಧಾರದ ಮೇಲೆ ಊಹಿಸಿಕೊಳ್ಳಬೇಕಾಗಿದೆ. ರಾಜಮಹಾರಾಜರೂ ಇತರ ಧನಿಕರೂ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಪಂಡಿತರನ್ನು ನೇಮಿಸಿಕೊಳ್ಳುತ್ತಿದ್ದರೆನ್ನಬಹುದು; ಅಂತೆಯೆ ಕೆಲವು ವರ್ಣೀಯರಿಗೆ ಮತೀಯವಾದ ಸೌಲಭ್ಯಗಳು ಇದ್ದಿರಬಹುದು. ಮಿಕ್ಕ ಬಹುತೇಕ ಮಂದಿಗೆ ಪ್ರಾಥಮಿಕ ಶಿಕ್ಷಣದ ಸೌಲಭ್ಯ ಬಹುಶಃ ಇದ್ದಿರಲಾರದು. ಊರಿನ ದೇವಾಲಯದಲ್ಲಿ, ಚಾವಡಿಯಲ್ಲಿ, ಧನಿಕರ ಪಡಸಾಲೆಗಳಲ್ಲಿ ಮಕ್ಕಳಿಗಾಗಿ ಅಕ್ಷರಾಭ್ಯಾಸದ ತರಗತಿಗಳು ನಡೆಯುತ್ತಿದ್ದಿರಬಹುದು. ಕ್ರಿ.ಶ. ದ ಆರಂಭದ ಹೊತ್ತಿಗೆ ಬೌದ್ಧಧರ್ಮದ ಪ್ರಚಾರದ ಫಲವಾಗಿ ಕನ್ನಡ ಅಕ್ಷರಾಭ್ಯಾಸಕ್ಕೆ ಪ್ರೋತ್ಸಾಹ ಬಂದಿರಬೇಕು. ಅದನ್ನು ಬಾಲಶಿಕ್ಷೆ, ಕನ್ನಡ ಶಿಕ್ಷೆ ಎನ್ನುತ್ತಿದ್ದರು. ಊರಿನಲ್ಲಿ ಪುರಾಣ ಮಾಡುತ್ತಿದ್ದ ಭಟ್ಟರು ಅನೇಕ ವೇಳೆ ಆ ಕಾರ್ಯಕ್ಕೆ ನೇಮಕವಾಗುತ್ತಿದ್ದರು. ಅದಕ್ಕಾಗಿ ಅವರಿಗೆ ಧನ, ಧಾನ್ಯ, ಭೂಮಿ ಅಥವಾ ಇತರ ರೂಪದ ಸಂಭಾವನೆ ದೊರಕುತ್ತಿದ್ದುವೆಂಬುದು ಅನೇಕ ಶಾಸನಗಳಿಂದ ಗೊತ್ತಾಗುತ್ತದೆ. ಅವರನ್ನು ಪಂಡಿತರೆಂದೂ ಕರೆಯುತ್ತಿದ್ದರು. ನರಸಿಂಹರಾಜಪುರದ ಪಂಡಿತರೊಬ್ಬರಿಗೆ ೧೨ ಗದ್ಯಾಣಗಳೂ ತಾಳಗುದದ ಪಂಡಿತರಿಗೆ, ೭ ಗದ್ಯಾಣಗಳೂ ಸಿಕ್ಕುತ್ತಿದ್ದುವೆಂದು ಶಾಸನದಲ್ಲಿ ಉಲ್ಲೇಖಗಳಿವೆ. ಉಚ್ಚಶಿಕ್ಷಣಕ್ಕಾಗಿ ಏರ್ಪಟ್ಟಿದ್ದ ಅಗ್ರಹಾರ ಬ್ರಹ್ಮಪುರಿಗಳಲ್ಲೂ ಪ್ರಾಥಮಿಕಶಿಕ್ಷಣಕ್ಕೆ ಅವಕಾಶವಿತ್ತು. ಅಲ್ಲಿ ಉಚ್ಚಶಿಕ್ಷಣದ ಪಂಡಿತರಿಗೆ ಹೆಚ್ಚು ಸಂಭಾವನೆಯೂ ಪ್ರಾಥಮಿಕ ಶಿಕ್ಷಣದ ಪಂಡಿತರಿಗೆ ಕಡಿಮೆ ಸಂಭಾವನೆಯೂ ಬರುತ್ತಿದ್ದುವೆಂದು ರಾಯಲ್ ಏಷ್ಯಾಟಿಕ್ ಸೊಸೈಟಿಯ ಬೊಂಬಾಯಿ ಶಾಖೆಯ ಪತ್ರಿಕೆಯ ೯ನೆಯ ಸಂಪುಟದಲ್ಲಿ ಹೇಳಲಾಗಿದೆ. ಅಲ್ಲಿ ಕಲಿಸುತ್ತಿದ್ದುದು ಮುಖ್ಯವಾಗಿ ಅಕ್ಷರಾಭ್ಯಾಸ, ಕಾಗುಣಿತ, ಕನ್ನಡ ಭಾಷೆಯ ಓದು, ಬರೆಹ, ಹ್ಯುಯೆನ್ ತ್ಸಾಂಗನ ಕಾಲಕ್ಕೆ ಆಗಲೆ ಕನ್ನಡದಲ್ಲಿ ಕಾವ್ಯಗಳೂ ಬಂದಿರಬೇಕು. ಅವನ್ನು ಓದಿ ಅರ್ಥಮಾಡಿಕೊಡುವ ಕಾರ್ಯ ಪ್ರಾಥಮಿಕ ತರಗತಿಯ ಅಂತಿಮ ಘಟ್ಟದ ವೇಳೆಗೆ ನಡೆಯುತ್ತಿದ್ದಿರಬೇಕು. ಅಲ್ಲಿಯ ಬೋಧನ ಕ್ರಮ ಇತ್ತೀಚಿನ ವರೆಗೂ ಹಳ್ಳಿಯ ಕೂಲಿಮಠಗಳಲ್ಲಿ ಇದ್ದಂತೆಯೇ ಇದ್ದಿರಬಹುದು. ಮಕ್ಕಳು ಬೆರಳಿನಿಂದ ಮರಳಿನ ಮೇಲೆ ಅಕ್ಷರ ಬರೆದು ಅದನ್ನು ಗಟ್ಟಿಯಾಗಿ ಪಠಿಸುತ್ತ ಕಲಿಯುತ್ತಿದ್ದರು. ಮಗ್ಗಿಯನ್ನು ಸಾಮೂಹಿಕವಾಗಿ ಹೇಳಿಕೊಂಡು ಅಭ್ಯಸಿಸುತ್ತಿದ್ದರು. ಪಾಠವನ್ನು ಅಧ್ಯಾಪಕರು ಹೇಳಿಕೊಡುವಾಗ ಮಕ್ಕಳು ಅದರಂತೆ ಉಚ್ಚರಿಸುತ್ತಿದ್ದರು. ಮಾರನೆಯ ದಿನ ಅದನ್ನು ಮನೆಯಲ್ಲಿ ಓದಿಕೊಂಡು ಬಂದು ಉಪಾಧ್ಯಾಯರ ಮುಂದೆ ಒಪ್ಪಿಸುತ್ತಿದ್ದರು.

Advertisements
About Manjunath Hiregange (5 Articles)
Creative Being, Generalist, Very Cool, Positive Mind

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: